"ರಾಯರು ಬಂದರು ಮಾವನ ಮನೆಗೆ" ಶೈಲಿಯಲ್ಲಿ ನಾ ಬರೆದ "ನೇಸರನಿಳಿದನು ಪಡುವಣದಲ್ಲಿ!"

_________________________________
ಪಲ್ಲವಿ : ನೇಸರನಿಳಿದನು ಪಡುವಣದಲ್ಲಿ, ಸಂಜೆಯಾಗಿತ್ತೂ...
ರಂಗಿನ ಹೊಳಪನು ಬಾನಲಿ ಚೆಲ್ಲಿ-
ತಂಪನು ತಂದಿತ್ತು। ಮನದಲಿ ಸಂತಸ ತುಂಬಿತ್ತು।


ಚರಣ: ಬಂದೆನು ನಾನು ನನ್ನಯ ಮನೆಗೆ,
ಮಡದಿಯು ನಿಂತೌಳೇ...
ಕಾಯುತ ಬಾಗಿಲ - ಬಳಿಯಲಿ ಅವಳು-
ನನ್ನನು ಹುಡುಕೌಳೆ; ಅವಳು ನನ್ನನು ಹುಡುಕೌಳೆ।

ಏನದು ಮೊಗವೊ ... ! ಚಂದಿರ ಮುಖವೊ .... ! (೨)
ಕಿರುನಗೆ ಅಧರದಲಿ, ಮೌನದ ಮಾತೇ... ಅವಳಲ್ಲೀ...!


ಪಲ್ಲವಿ : ನೇಸರನಿಳಿದನು ಪಡುವಣದಲ್ಲಿ, ಸಂಜೆಯಾಗಿತ್ತೂ...
ರಂಗಿನ ಹೊಳಪನು ಬಾನಲಿ ಚೆಲ್ಲಿ-
ತಂಪನು ತಂದಿತ್ತು। ಮನದಲಿ ಸಂತಸ ತುಂಬಿತ್ತು।



ಚರಣ: ಹುಣ್ಣಿಮೆ ಚಂದ್ರ ನಾಚುವ ಹಾಗೆ - ನಕ್ಕಳು ಕಂಡಾಗ!
ನನ್ನಯ ಮಡದಿಯ, ಹೂನಗೆ ಕಂಡು-
ಪ್ರೇಮದ ಶುಭಯೋಗ-ನನ್ನಲಿ ಪ್ರೇಮದ ಶುಭಯೋಗ!

ತಂಬಿಗೆಯಲ್ಲಿ ....! ನೀರನು ತಂದು ....! (೨)
ಕಾಲಿಗೆ ಎರಚಿದಳು, ಚೆಂದದ ಕಿರುನಗೆ ಬೀರಿದಳು!!


ಪಲ್ಲವಿ : ನೇಸರನಿಳಿದನು ಪಡುವಣದಲ್ಲಿ, ಸಂಜೆಯಾಗಿತ್ತೂ...
ರಂಗಿನ ಹೊಳಪನು ಬಾನಲಿ ಚೆಲ್ಲಿ-
ತಂಪನು ತಂದಿತ್ತು। ಮನದಲಿ ಸಂತಸ ತುಂಬಿತ್ತು।




ಚರಣ : ಮನೆಯಲಿ ದೀಪದ ಬೆಳಕನು ಚೆಲ್ಲಿ - ಸಿಂಗಾರ ಮಾಡೌಳೆ...!
ಘಮ, ಘಮ ವಾಸನೆ ತಂಬಿಗೆಯಲ್ಲಿ-
ಪಾಯಸ ತಂದೌಳೆ। ಕುಡಿಯಲು ಪಾಯಸ ತಂದೌಳೆ!

ತಂದೆನು ಮಲ್ಲಿಗೆ ....! ಮುಡಿಸಿದೆ ಅವಳಿಗೆ ....! (೨)
ಆಕಿದೆ ಸಿಂಧೂರ॥ ಹಣೆಯಲಿ ಚೆಂದದ ಸಿಂಧೂರ!!


ಪಲ್ಲವಿ: ನೇಸರನಿಳಿದ ಹೊತ್ತದು ಮುಗಿದು ರಾತ್ರಿಯಾಗಿತ್ತು !
ಹುಣ್ಣಿಮೆ ಚಂದ್ರ ನಗುತಲಿ ಬಂದು-
ತಂಪನು ತಂದಿತ್ತು, ತಣ್ಣನೆ ಗಾಳಿಯು ಬೀಸಿತ್ತು ...!


ಚರಣ: ಮಲ್ಲಿಗೆ ಹೂಗಳ ಪರಿಮಳ ತುಂಬಿ, ಹಾಸಿಗೆ ಹಾಸಿತ್ತೂ॥!
ಚೆಂದದ ಹುಡುಗಿಯ ; ಅಂದದ ಹುಡುಗಿಯ-
ಆಸೆಯು ತಿಳಿದಿತ್ತು। ಮನಸಿನ ಆಸೆಯು ತಿಳಿದಿತ್ತು।

ಬಂದಳು ಮೆಲ್ಲಗೆ ...! ನವಿಲಿನ ನಡಿಗೆ ....! (೨)
ನಾಚಿಕೆ ಅವಳಲ್ಲೀ... ಮೌನದ ಮಾತೇ ಅಧರದಲಿ!


ಪಲ್ಲವಿ: ಚಂದಿರ ನಗುತ - ಹುಣ್ಣಿಮೆ ಇರುಳಲಿ-
ಜಾರುತ ಮರೆಯಾದಾ.....
ಕನಸಲಿ ಬಂದು, ಮಡಿಲಲಿ ನಿಂದು-
ಕಿಲ, ಕಿಲ ನಗುತಿದ್ದ! ನಲ್ಲೆಯ ಮಡಿಲಲಿ ಮಲಗಿದ್ದ!
ನಲ್ಲೆಯ ಮಡಿಲಲಿ ಮಲಗಿದ್ದ!
ನಲ್ಲೆಯ ಮಡಿಲಲಿ ಮಲಗಿದ್ದಾ...!